03.06.20 Morning Kannada Murli Om Shanti
BapDada Madhuban
ಮಧುರ ಮಕ್ಕಳೇ - ನೀವು
ಶ್ರೀಮತದನುಸಾರ ಎಲ್ಲರಿಗೆ ಸುಖ ಕೊಡಬೇಕಾಗಿದೆ, ಶ್ರೇಷ್ಠರಾಗಿ ಅನ್ಯರನ್ನೂ ಶ್ರೇಷ್ಠರನ್ನಾಗಿ ಮಾಡಲು
ನಿಮಗೆ ಶ್ರೇಷ್ಠ ಮತವು ಸಿಗುತ್ತಿದೆ.
ಪ್ರಶ್ನೆ:
ದಯಾಹೃದಯಿ
ಮಕ್ಕಳ ಹೃದಯದಲ್ಲಿ ಯಾವ ಅಲೆಯು ಬರುತ್ತದೆ? ಅದಕ್ಕೆ ಏನು ಮಾಡಬೇಕು?
ಉತ್ತರ:
ದಯಾಹೃದಯಿ ಮಕ್ಕಳಿಗೆ ಮನಸ್ಸಾಗುತ್ತದೆ - ನಾವು ಹಳ್ಳಿ-ಹಳ್ಳಿಯಲ್ಲಿ ಹೋಗಿ ಸರ್ವೀಸ್ ಮಾಡಬೇಕು.
ಈಗಂತೂ ಪಾಪ! ಬಹಳ ದುಃಖಿಯಾಗಿದ್ದಾರೆ. ಅವರಿಗೆ ಹೋಗಿ ಈ ಖುಷಿಯ ಸಮಾಚಾರವನ್ನು ತಿಳಿಸೋಣ -
ವಿಶ್ವದಲ್ಲಿ ಸುಖ-ಶಾಂತಿ, ಪವಿತ್ರತೆಯ ದೈವೀ ಸ್ವರಾಜ್ಯವು ಸ್ಥಾಪನೆಯಾಗುತ್ತಿದೆ, ಇದು ಅದೇ
ಮಹಾಭಾರತ ಯುದ್ಧವಾಗಿದೆ, ಅವಶ್ಯವಾಗಿ ಆ ಸಮಯದಲ್ಲಿ ತಂದೆಯೂ ಇದ್ದರು, ಈಗಲೂ ಸಹ ತಂದೆಯು
ಬಂದಿದ್ದಾರೆ.
ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಇಲ್ಲಿ ಕುಳಿತಿದ್ದೀರಿ ಅಂದಮೇಲೆ ಇದನ್ನು ಅವಶ್ಯವಾಗಿ ತಿಳಿದುಕೊಂಡಿದ್ದೀರಿ
- ನಾವು ಈಶ್ವರೀಯ ಸಂತಾನರಾಗಿದ್ದೇವೆ, ಅವಶ್ಯವಾಗಿ ತಮ್ಮನ್ನು ಆತ್ಮನೆಂದೇ ತಿಳಿಯುತ್ತೇವೆ.
ಶರೀರವಿದ್ದಾಗಲೇ ಆತ್ಮವು ಅದರ ಮೂಲಕ ಕೇಳುತ್ತದೆ. ತಂದೆಯು ಈ ಶರೀರವನ್ನು ಆಧಾರವಾಗಿ
ತೆಗೆದುಕೊಂಡಿದ್ದಾರೆ. ಆದ್ದರಿಂದ ತಿಳಿಸುತ್ತಾರೆ - ನಾವು ಈಶ್ವರೀಯ ಸಂತಾನರು ಅಥವಾ
ಸಂಪ್ರದಾಯದವರಾಗಿದ್ದೇವೆ ಮತ್ತೆ ನಾವು ದೈವೀ ಸಂಪ್ರದಾಯದವರಾಗುತ್ತೇವೆ ಎಂಬುದು ನಿಮಗೆ ಅರ್ಥವಾಗಿದೆ.
ಸ್ವರ್ಗದ ಮಾಲೀಕರು ದೇವತೆಗಳೇ ಆಗಿರುತ್ತಾರೆ. ನಾವು ಪುನಃ 5000 ವರ್ಷಗಳ ಮೊದಲಿನಂತೆ ದೈವೀ
ಸ್ವರಾಜ್ಯದ ಸ್ಥಾಪನೆ ಮಾಡುತ್ತಿದ್ದೇವೆ ನಂತರ ನಾವು ದೇವತೆಗಳಾಗುತ್ತೇವೆ. ಈ ಸಮಯದಲ್ಲಿ ಇಡೀ
ಪ್ರಪಂಚ ಅದರಲ್ಲಿಯೂ ವಿಶೇಷವಾಗಿ ಭಾರತದ ಮನುಷ್ಯರೆಲ್ಲರೂ ಪರಸ್ಪರ ಒಬ್ಬರು ಇನ್ನೊಬ್ಬರಿಗೆ
ದುಃಖವನ್ನೇ ಕೊಡುತ್ತಾರೆ. ಅವಶ್ಯವಾಗಿ ಸುಖಧಾಮವು ಇರುತ್ತದೆ. ಪರಮಪಿತ ಪರಮಾತ್ಮನೇ ಬಂದು
ಎಲ್ಲರನ್ನು ಸುಖಿಯನ್ನಾಗಿ ಮಾಡುತ್ತಾರೆಂಬುದು ಅವರಿಗೆ ತಿಳಿದೇ ಇಲ್ಲ. ಇಲ್ಲಿ ಮನೆ-ಮನೆಯಲ್ಲಿಯೂ
ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಾರೆ. ಇಡೀ ವಿಶ್ವದಲ್ಲಿ ದುಃಖವೇ ದುಃಖವಿದೆ. ತಂದೆಯು
ನಿಮ್ಮನ್ನು 21 ಜನ್ಮಗಳಿಗಾಗಿ ಸದಾ ಸುಖಿಯನ್ನಾಗಿ ಮಾಡುತ್ತಾರೆ, ದುಃಖವು ಯಾವಾಗ ಆರಂಭವಾಗಿದೆ
ಮತ್ತು ಯಾವಾಗ ಕೊನೆಗೊಳ್ಳುತ್ತದೆ, ಇದು ಮತ್ತ್ಯಾರ ಬುದ್ಧಿಯಲ್ಲಿಯೂ ಚಿಂತನೆ ನಡೆಯುವುದಿಲ್ಲ.
ಅವಶ್ಯವಾಗಿ ನಾವು ಈಶ್ವರೀಯ ಸಂಪ್ರದಾಯದವರಾಗಿದ್ದೇವೆ. ಹಾಗೆ ನೋಡಿದರೆ ಇಡೀ ಪ್ರಪಂಚದ ಮನುಷ್ಯ
ಮಾತ್ರರೆಲ್ಲರೂ ಈಶ್ವರೀಯ ಸಂತಾನರಾಗಿದ್ದಾರೆ ಎಂದು ನಿಮಗೆ ಬುದ್ಧಿಯಲ್ಲಿದಿದೆ. ಪ್ರತಿಯೊಬ್ಬರೂ
ಅವರನ್ನು ತಂದೆಯೆಂದು ಕರೆಯುತ್ತಾರೆ. ಈಗ ಮಕ್ಕಳಿಗೆ ತಿಳಿದಿದೆ – ಶಿವ ತಂದೆಯು ನಮಗೆ ಶ್ರೀಮತವನ್ನು
ಕೊಡುತ್ತಿದ್ದಾರೆ, ಶ್ರೀಮತವು ಪ್ರಸಿದ್ಧವಾಗಿದೆ. ಇದು ಸರ್ವ ಶ್ರೇಷ್ಠ ಭಗವಂತನ ಸರ್ವ ಶ್ರೇಷ್ಠ
ಮತವಾಗಿದೆ. ಅವರ ಗತಿಮತವು ಭಿನ್ನವೆಂದು ಗಾಯನವೂ ಇದೆ. ಶಿವ ತಂದೆಯ ಶ್ರೀಮತವು ನಮ್ಮನ್ನು
ಹೇಗಿದ್ದವರನ್ನು ಏನು ಮಾಡುತ್ತದೆ! ಸ್ವರ್ಗದ ಮಾಲೀಕರಾಗುತ್ತೇವೆ. ಉಳಿದ ಯಾರೆಲ್ಲಾ ಮನುಷ್ಯ
ಮಾತ್ರರಿದ್ದಾರೆಯೋ ಅವರಂತೂ ನರಕದ ಮಾಲೀಕರನ್ನಾಗಿಯೇ ಮಾಡುತ್ತಾರೆ. ಈಗ ನೀವು ಸಂಗಮದಲ್ಲಿದ್ದೀರಿ.
ಈ ನಿಶ್ಚಯವಿದೆಯಲ್ಲವೆ. ನಿಶ್ಚಯ ಬುದ್ಧಿಯವರೇ ಇಲ್ಲಿ ಬರುತ್ತಾರೆ ಮತ್ತು ತಂದೆಯು ಪುನಃ ಸುಖಧಾಮದ
ಮಾಲೀಕರನ್ನಾಗಿ ಮಾಡುತ್ತಾರೆಂದು ತಿಳಿಯುತ್ತಾರೆ. ನಾವೇ 100% ಪವಿತ್ರ ಗೃಹಸ್ಥ
ಮಾರ್ಗದವರಾಗಿದ್ದೆವು ಎಂಬ ಸ್ಮೃತಿಯೂ ಬಂದಿದೆ, 84 ಜನ್ಮಗಳ ಲೆಕ್ಕವೂ ಇದೆಯಲ್ಲವೆ. ಯಾರು-ಯಾರು
ಎಷ್ಟು ಜನ್ಮಗಳನ್ನು ಪಡೆಯುತ್ತಾರೆ, ಯಾವ ಧರ್ಮದವರು ಕೊನೆಯಲ್ಲಿ ಬರುತ್ತಾರೆಯೋ ಅವರ ಜನ್ಮಗಳು
ಕಡಿಮೆಯಾಗುತ್ತದೆ.
ನೀವು ಮಕ್ಕಳೀಗ ಈ ನಿಶ್ಚಯವನ್ನಿಡಬೇಕಾಗಿದೆ - ನಾವು ಈಶ್ವರೀಯ ಸಂತಾನರಾಗಿದ್ದೇವೆ, ಎಲ್ಲರನ್ನೂ
ಶ್ರೇಷ್ಠರನ್ನಾಗಿ ಮಾಡಲು ನಮಗೆ ಶ್ರೇಷ್ಠ ಮತವು ಸಿಗುತ್ತಿದೆ. ಅದೇ ತಂದೆಯು ನಮಗೆ ರಾಜಯೋಗವನ್ನು
ಕಲಿಸುತ್ತಾರೆ. ವೇದಶಾಸ್ತ್ರ ಇತ್ಯಾದಿಯೆಲ್ಲವೂ ಭಗವಂತನೊಂದಿಗೆ ಮಿಲನ ಮಾಡುವ ಮಾರ್ಗಗಳಾಗಿವೆ ಎಂದು
ಮನುಷ್ಯರು ತಿಳಿಯುತ್ತಾರೆ ಮತ್ತು ಭಗವಂತನು ತಿಳಿಸುತ್ತಾರೆ - ಇವುಗಳಿಂದ ಯಾರೂ ನನ್ನನ್ನು ಮಿಲನ
ಮಾಡುವುದಿಲ್ಲ, ನಾನೇ ಬರುತ್ತೇನೆ. ಆದ್ದರಿಂದ ನನ್ನ ಜಯಂತಿಯನ್ನಾಚರಿಸುತ್ತಾರೆ ಆದರೆ ಯಾವಾಗ ಮತ್ತು
ಯಾರ ತನುವಿನಲ್ಲಿ ಬರುತ್ತೇನೆಂಬ ಮಾತುಗಳು ನೀವು ಬ್ರಾಹ್ಮಣರ ವಿನಃ ಮತ್ತ್ಯಾರಿಗೂ ತಿಳಿದಿಲ್ಲ.
ನೀವೀಗ ಎಲ್ಲರಿಗೆ ಸುಖ ಕೊಡಬೇಕಾಗಿದೆ. ಪ್ರಪಂಚದಲ್ಲಿ ಎಲ್ಲರೂ ಪರಸ್ಪರ ದುಃಖವನ್ನೇ ಕೊಡುತ್ತಾರೆ.
ಆದರೆ ವಿಕಾರದಲ್ಲಿ ಹೋಗುವುದೆಂದರೆ ದುಃಖ ಕೊಡುವುದಾಗಿದೆ ಎಂಬುದನ್ನು ಅವರು ತಿಳಿದುಕೊಂಡಿಲ್ಲ. ಇದು
ಮಹಾನ್ ದುಃಖವಾಗಿದೆ ಏಕೆಂದರೆ ಪವಿತ್ರವಾಗಿದ್ದ ಕುಮಾರಿಯನ್ನು ಅಪವಿತ್ರವನ್ನಾಗಿ ಮಾಡುತ್ತಾರೆ,
ನರಕವಾಸಿಗಳಾಗಲು ಎಷ್ಟೊಂದು ಸಮಾರಂಭಗಳನ್ನು ಮಾಡುತ್ತಾರೆ. ಇಲ್ಲಂತೂ ಅಂತಹ ಯಾವುದೇ ಮಾತಿಲ್ಲ. ನೀವು
ಬಹಳ ಶಾಂತಿಯಿಂದ ಕುಳಿತಿದ್ದೀರಿ. ಎಲ್ಲರೂ ಖುಷಿ ಪಡುತ್ತಾರೆ, ಶಿವ ಶಕ್ತಿಯರ ರೂಪದಲ್ಲಿ ನಿಮ್ಮ
ಮಹಿಮೆಯಿದೆ. ನಿಮ್ಮ ಮುಂದೆ ಲಕ್ಷ್ಮೀ-ನಾರಾಯಣರ ಗೌರವವೂ ಸಹಾ ಏನೇನು ಇಲ್ಲ, ಇಡೀ ವಿಶ್ವವನ್ನು ಸದಾ
ಸುಖಿಯನ್ನಾಗಿ ಮಾಡಿದರೋ ಅದೇ ರೀತಿ ನೀವೂ ಸಹ ತಂದೆಯ ಸಹಯೋಗಿಗಳಾಗಿದ್ದೀರಿ. ಆದ್ದರಿಂದ ನೀವು
ಶಕ್ತಿಯರಾದ ಭಾರತ ಮಾತೆಯರಿಗೆ ಬಹಳ ಮಹಿಮೆಯಿದೆ. ಈ ಲಕ್ಷ್ಮೀ-ನಾರಾಯಣರಂತೂ ರಾಜ-ರಾಣಿ ಮತ್ತು
ಪ್ರಜೆಗಳೆಲ್ಲರೂ ಸ್ವರ್ಗವಾಸಿಗಳಾಗಿದ್ದಾರೆ. ಅದೇನು ದೊಡ್ಡ ಮಾತಾಗಿದೆಯೇ! ಹೇಗೆ ಅವರು
ಸ್ವರ್ಗವಾಸಿಗಳಾಗಿದ್ದಾರೆಯೋ ಹಾಗೆಯೇ ಇಲ್ಲಿನ ರಾಜ-ರಾಣಿ ಎಲ್ಲರೂ ನರಕವಾಸಿಗಳಾಗಿದ್ದಾರೆ, ಇಂತಹ
ನರಕವಾಸಿಗಳನ್ನು ನೀವು ಸ್ವರ್ಗವಾಸಿಗಳನ್ನ್ನಾಗಿ ಮಾಡುತ್ತೀರಿ. ಮನುಷ್ಯರು ಏನನ್ನೂ
ತಿಳಿದುಕೊಂಡಿಲ್ಲ, ಸಂಪೂರ್ಣ ತುಚ್ಛ ಬುದ್ಧಿಯವರಾಗಿದ್ದಾರೆ, ಏನೇನನ್ನೋ ಮಾಡುತ್ತಿರುತ್ತಾರೆ.
ಎಷ್ಟೊಂದು ಹೊಡೆದಾಟಗಳಿವೆ, ಪ್ರತೀ ಮಾತಿನಲ್ಲಿ ದುಃಖಿಯಾಗಿದ್ದಾರೆ, ಸತ್ಯಯುಗದಲ್ಲಿ ಸುಖವೇ
ಸುಖವಿರುತ್ತದೆ. ಈಗ ಎಲ್ಲರಿಗೆ ಸುಖ ಕೊಡುವುದಕ್ಕಾಗಿ ತಂದೆಯು ಶ್ರೇಷ್ಠ ಮತವನ್ನು ಕೊಡುತ್ತಾರೆ.
ಶ್ರೀಮದ್ಭ್ಭಗವಾನುವಾಚ ಎಂದು ಹೇಳುತ್ತಾರೆ. ಶ್ರೀಮತವು ಮನುಷ್ಯ ವಾಚವಲ್ಲ. ಸತ್ಯಯುಗದಲ್ಲಿ
ದೇವತೆಗಳಿಗೆ ಮತ ಕೊಡುವ ಅವಶ್ಯಕತೆಯೇ ಇರುವುದಿಲ್ಲ ಏಕೆಂದರೆ ಇಲ್ಲಿ ನಿಮಗೆ ಶ್ರೀಮತವು ಸಿಗುತ್ತದೆ.
ತಂದೆಯ ಜೊತೆ ನೀವೂ ಸಹ ಶಿವ ಶಕ್ತಿಯರೆಂದು ಗಾಯನ ಯೋಗ್ಯರಾಗುತ್ತೀರಿ. ಈಗ ಪುನಃ ಆ ಪಾತ್ರವು
ಪ್ರತ್ಯಕ್ಷ ರೂಪದಲ್ಲಿ ಅಭಿನಯವಾಗುತ್ತಿದೆ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು
ಮನಸಾ-ವಾಚಾ-ಕರ್ಮಣಾ ಎಲ್ಲರಿಗೂ ಸುಖ ಕೊಡಬೇಕಾಗಿದೆ, ಎಲ್ಲರಿಗೆ ಸುಖದ ಮಾರ್ಗವನ್ನೇ ತಿಳಿಸಬೇಕಾಗಿದೆ.
ನಿಮ್ಮ ಕರ್ತವ್ಯವೇ ಇದಾಗಿದೆ. ಶರೀರ ನಿರ್ವಹಣೆಗಾಗಿ ಮನುಷ್ಯರು ಉದ್ಯೋಗ-ವ್ಯವಹಾರಗಳನ್ನು
ಮಾಡಬೇಕಾಗುತ್ತದೆ. ಮುಸ್ಸಂಜೆಯಲ್ಲಿ ದೇವತೆಗಳು ಪರಿಕ್ರಮಣ ಮಾಡುತ್ತಾರೆಂದು ಹೇಳುತ್ತಾರೆ ಅಂದಾಗ
ದೇವತೆಗಳು ಇಲ್ಲಿಗೆ ಎಲ್ಲಿಂದ ಬರುವರು! ಆದರೆ ಈ ಸಮಯಕ್ಕೆ ಶುದ್ಧ ವೇಳೆಯೆಂದು ಹೇಳುತ್ತಾರೆ. ಈ
ಸಮಯದಲ್ಲಿ ಎಲ್ಲರಿಗೆ ಬಿಡುವು ಇರುತ್ತದೆ. ನೀವು ಮಕ್ಕಳು ನಡೆಯುತ್ತಾ-ತಿರುಗಾಡುತ್ತಾ,
ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾವುದೇ ದೇಹಧಾರಿಯ ಚಾಕರಿಯನ್ನು
ಮಾಡಬೇಕಾಗಿಲ್ಲ. ದ್ರೌಪದಿಯ ಕಾಲನ್ನು ಒತ್ತಿದರೆಂದು ಗಾಯನವಿದೆ. ಇದರ ಅರ್ಥವನ್ನು ಮನುಷ್ಯರು
ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ಇದು ಸ್ಥೂಲವಾಗಿ ಕಾಲನ್ನು ಒತ್ತುವ ಮಾತಲ್ಲ. ತಂದೆಯ ಬಳಿ ಬಹಳ
ಮಂದಿ ವೃದ್ಧೆಯರು ಬರುತ್ತಾರೆ, ಭಕ್ತಿ ಮಾಡುತ್ತಾ-ಮಾಡುತ್ತಾ ಸುಸ್ತಾಗಿದ್ದಾರೆ. ಅರ್ಧಕಲ್ಪ ಬಹಳ
ಕಷ್ಟವನ್ನು ಅನುಭವಿಸಿದ್ದಾರಲ್ಲವೆ. ಇದಕ್ಕೆ ಅವರು ಕಾಲನ್ನು ಒತ್ತುವ ಶಬ್ಧವನ್ನು ಉಪಯೋಗಿಸಿದ್ದಾರೆ.
ಕೃಷ್ಣನು ಕಾಲನ್ನೇಕೆ ಒತ್ತುತ್ತಾನೆ, ಇದು ಶೋಭಿಸುತ್ತದೆಯೇ? ನೀವು ಕೃಷ್ಣನಿಗೆ ಕಾಲನ್ನು ಒತ್ತಲು
ಬಿಡುವಿರಾ? ಕೃಷ್ಣನನ್ನು ನೋಡುತ್ತಿದ್ದಂತೆಯೇ ಅಪ್ಪಿಕೊಳ್ಳುವಿರಿ, ಕೃಷ್ಣನಲ್ಲಿ ಬಹಳ
ಚಮತ್ಕಾರವಿರುತ್ತದೆ. ಕೃಷ್ಣನ ವಿನಃ ಮತ್ತ್ಯಾವುದೇ ಮಾತು ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ.
ಅವನೇ ಎಲ್ಲರಿಗಿಂತ ತೇಜೋಮಯನಾಗಿದ್ದಾನೆ ಅಂದಮೇಲೆ ಚಿಕ್ಕ ಮಗುವಾದ ಕೃಷ್ಣನು ಮುರುಳಿಯನ್ನು
ನುಡಿಸಿದ ಮಾತೇ ಇಲ್ಲಿ ಬರುವುದಿಲ್ಲ. ಇಲ್ಲಿ ನೀವು ಶಿವ ತಂದೆಯೊಂದಿಗೆ ಹೇಗೆ ಮಿಲನ ಮಾಡುತ್ತೀರಿ?
ನೀವು ಮಕ್ಕಳಿಗೆ ಶಿವ ತಂದೆಯನ್ನು ನೆನಪು ಮಾಡಿ ನಂತರ ಅವರ ಬಳಿಗೆ ಬನ್ನಿ ಎಂದು ಹೇಳಬೇಕಾಗುತ್ತದೆ.
ನೀವು ಮಕ್ಕಳಿಗಂತೂ ಬಹಳ ಖುಷಿಯಿರಬೇಕು – ಶಿವ ತಂದೆಯು 21 ಜನ್ಮಗಳಿಗಾಗಿ ನಮ್ಮನ್ನು ಸುಖಿಯನ್ನಾಗಿ
ಮಾಡುತ್ತಾರೆ, ಇಂತಹ ತಂದೆಯ ಮೇಲೆ ಬಲಿಹಾರಿಯಾಗಿ ಬಿಡಬೇಕು. ಯಾರಾದರೂ ಸುಪುತ್ರ ಮಕ್ಕಳಿದ್ದರೆ ಅವರು
ತಂದೆಯ ಪ್ರತೀ ಮಾತಿಗೂ ಬಲಿಹಾರಿಯಾಗುತ್ತಾರೆ. ತಂದೆಯ ಪ್ರತಿಯೊಂದು ಕಾಮನೆಯನ್ನು ಈಡೇರಿಸುತ್ತಾರೆ.
ಇನ್ನೂ ಕೆಲವರು ಈ ರೀತಿಯಿರುತ್ತಾರೆ ತಂದೆಯ ಕೊಲೆಯನ್ನು ಮಾಡಿಸಿ ಬಿಡುತ್ತಾರೆ. ಇಲ್ಲಿ ನೀವು
ಪ್ರಿಯಾತಿ ಪ್ರಿಯರಾಗಬೇಕಾಗಿದೆ. ಯಾರಿಗೂ ದುಃಖವನ್ನು ಕೊಡಬೇಡಿ. ಯಾರು ದಯಾಹೃದಯಿ ಮಕ್ಕಳಿದ್ದಾರೆಯೋ
ಅವರಿಗೆ ನಾವು ಹಳ್ಳಿ-ಹಳ್ಳಿಯಲ್ಲಿ ಹೋಗಿ ಸರ್ವೀಸ್ ಮಾಡಬೇಕೆಂದು ಸಂಕಲ್ಪವು ಬರುತ್ತದೆ. ಪಾಪ!
ಎಲ್ಲರೂ ಬಹಳ ದುಃಖಿಯಾಗಿದ್ದಾರೆ, ಅವರಿಗೆ ಹೋಗಿ ಖುಷಿಯ ಸಂದೇಶವನ್ನು ತಿಳಿಸಿ- ವಿಶ್ವದಲ್ಲಿ ಸುಖ,
ಶಾಂತಿ, ಪವಿತ್ರತೆಯ ದೈವೀ ಸ್ವರಾಜ್ಯವು ಪ್ರಾಪ್ತಿಯಾಗುತ್ತಿದೆ, ಇದು ಅದೇ ಮಹಾಭಾರತ ಯುದ್ಧವಾಗಿದೆ.
ಅವಶ್ಯವಾಗಿ ತಂದೆಯು ಆ ಸಮಯದಲ್ಲಿದ್ದರು, ಈಗಲೂ ತಂದೆಯು ಬಂದಿದ್ದಾರೆ. ನಮ್ಮನ್ನು
ಪುರುಷೋತ್ತಮರನ್ನಾಗಿ ಮಾಡುತ್ತಿದ್ದಾರೆ, ಇದು ಪುರುಷೋತ್ತಮ ಸಂಗಮಯುಗವಾಗಿದೆ. ನಾವು ಹೇಗೆ
ಪುರುಷೋತ್ತಮರಾಗುತ್ತೇವೆ ಎಂಬುದಂತೂ ನಿಮಗೆ ತಿಳಿದಿದೆ. ನಿಮ್ಮ ಉದ್ದೇಶವೇನೆಂದು ಯಾರಾದರೂ
ಪ್ರಶ್ನಿಸಿದಾಗ ಅವರಿಗೆ ತಿಳಿದಿದೆ - ನಮ್ಮ ಉದ್ದೇಶವು ಮನುಷ್ಯರಿಂದ ದೇವತೆಗಳಾಗುವುದಾಗಿದೆ.
ದೇವತೆಗಳು ಪ್ರಸಿದ್ಧರಾಗಿದ್ದಾರೆ. ಯಾರು ದೇವತೆಗಳ ಭಕ್ತರಿರುವರೋ ಅವರಿಗೆ ತಿಳಿಸಿರಿ ಎಂದು ತಂದೆಯು
ಹೇಳುತ್ತಾರೆ. ಭಕ್ತಿಯೂ ಸಹ ಮೊಟ್ಟ ಮೊದಲಿಗೆ ಶಿವನ ಮತ್ತು ದೇವತೆಗಳ ಭಕ್ತಿಯನ್ನು ನೀವೇ
ಆರಂಭಿಸಿದಿರಿ ಆದ್ದರಿಂದ ಮೊಟ್ಟ ಮೊದಲಿಗೆ ಶಿವ ತಂದೆಯ ಭಕ್ತರಿಗೇ ತಿಳಿಸಬೇಕು. ಅವರಿಗೆ ಈ ರೀತಿ
ತಿಳಿಸಿ - ನನ್ನನ್ನು ನೆನಪು ಮಾಡಿ ಎಂದು ಶಿವ ತಂದೆಯು ತಿಳಿಸುತ್ತಾರೆ. ಶಿವನ ಪೂಜೆಯನ್ನು
ಮಾಡುತ್ತಾರೆ ಆದರೆ ಪತಿತ-ಪಾವನನು ತಂದೆಯಾಗಿದ್ದಾರೆಂದು ಬುದ್ಧಿಯಲ್ಲಿ ಬರುವುದಿಲ್ಲ.
ಭಕ್ತಿಮಾರ್ಗದಲ್ಲಿ ನೋಡಿ, ಎಷ್ಟೊಂದು ಕಷ್ಟ ಪಡುತ್ತಾರೆ. ಶಿವ ಲಿಂಗವನ್ನಂತೂ ಮನೆಯಲ್ಲಿಯೂ
ಇಟ್ಟುಕೊಳ್ಳಬಹುದು, ಅವರ ಪೂಜೆ ಮಾಡಬಹುದು ಅಂದಮೇಲೆ ಅಮರನಾಥ, ಬದರೀನಾಥ ಮುಂತಾದೆಡೆಗೆ ಹೋಗುವ
ಅವಶ್ಯಕತೆಯೇನಿದೆ? ಆದರೆ ಭಕ್ತಿಮಾರ್ಗದಲ್ಲಿ ಮನುಷ್ಯರು ಅವಶ್ಯವಾಗಿ ಕಷ್ಟ ಪಡಲೇಬೇಕಾಗಿದೆ. ನಾನು
ನಿಮ್ಮನ್ನು ಅದೆಲ್ಲದರಿಂದ ಬಿಡಿಸುತ್ತೇನೆ. ನೀವು ಶಿವ ಶಕ್ತಿಯರು ಶಿವನ ಮಕ್ಕಳಾಗಿದ್ದೀರಿ.
ತಂದೆಯಿಂದ ಶಕ್ತಿಯನ್ನು ಪಡೆಯುತ್ತಿದ್ದೀರಿ ಅದೂ ಸಹ ನೆನಪಿನಿಂದಲೇ ಸಿಗುವುದು, ವಿಕರ್ಮಗಳು
ವಿನಾಶವಾಗುವುದು. ಪತಿತ-ಪಾವನನು ತಂದೆಯಲ್ಲವೆ. ನೆನಪಿನಿಂದಲೇ ನೀವು ವಿಕರ್ಮಾಜೀತರು
ಪಾವನರಾಗುತ್ತೀರಿ ಅಂದಾಗ ಎಲ್ಲರಿಗೆ ಈ ಮಾರ್ಗವನ್ನು ತಿಳಿಸಿ. ನೀವೀಗ ರಾಮನ ಮಕ್ಕಳಾಗಿದ್ದೀರಿ.
ರಾಮ ರಾಜ್ಯದಲ್ಲಿ ಸುಖವು, ರಾವಣ ರಾಜ್ಯದಲ್ಲಿ ದುಃಖವೂ ಇದೆ. ಭಾರತದಲ್ಲಿಯೇ ಎಲ್ಲರ ಚಿತ್ರಗಳಿವೆ.
ಯಾರಿಗೆ ಇಷ್ಟೊಂದು ಪೂಜೆಗಳು ನಡೆಯುತ್ತದೆ, ಲೆಕ್ಕವಿಲ್ಲದಷ್ಟು ಮಂದಿರಗಳಿವೆ, ಕೆಲವರು ಹನುಮಂತನ
ಪೂಜಾರಿಗಳು, ಇನ್ನೂ ಕೆಲವರು ಇನ್ನೊಬ್ಬರ ಪೂಜಾರಿಗಳು, ಇದಕ್ಕೆ ಅಂಧಶ್ರದ್ಧೆಯೆಂದು ಹೇಳಲಾಗುತ್ತದೆ.
ನಾವೂ ಸಹ ಅಂಧರಾಗಿದ್ದೆವು ಎಂಬುದು ನಿಮಗೆ ಅರ್ಥವಾಯಿತು. ಬ್ರಹ್ಮಾ-ವಿಷ್ಣು-ಶಂಕರ ಯಾರಾಗಿದ್ದಾರೆ,
ಯಾರು ಪೂಜ್ಯರಾಗಿದ್ದರೋ ಅವರೇ ನಂತರ ಪೂಜಾರಿಯಾದರು ಎಂಬುದು ಈ ಬ್ರಹ್ಮನಿಗೂ ತಿಳಿದಿರಲಿಲ್ಲ.
ಸತಯ್ಯುಗದಲ್ಲಿ ಪೂಜ್ಯರಾಗಿದ್ದವರು ಇಲ್ಲಿ ಪೂಜಾರಿಯಾಗಿದ್ದಾರೆ. ತಂದೆಯು ಎಷ್ಟೊಂದು ಚೆನ್ನಾಗಿ
ತಿಳಿಸಿಕೊಡುತ್ತಾರೆ - ಪೂಜ್ಯರಿರುವುದೇ ಸತ್ಯಯುಗದಲ್ಲಿ, ಇಲ್ಲಿ ಪೂಜಾರಿಗಳಿದ್ದಾರೆ ಆದ್ದರಿಂದ
ಪೂಜೆಯನ್ನೇ ಮಾಡುತ್ತಾರೆ. ನೀವು ಶಿವ ಶಕ್ತಿಯರಾಗಿದ್ದೀರಿ, ನೀವೀಗ ಪೂಜಾರಿಗಳೂ ಅಲ್ಲ, ಪೂಜ್ಯರೂ
ಅಲ್ಲ ತಂದೆಯನ್ನು ಮರೆಯಬೇಡಿ. ಇದು ಸಾಧಾರಣ ತನುವಾಗಿದೆಯಲ್ಲವೆ. ಇವರಲಿ ಸರ್ವಶ್ರೇಷ್ಠ ಭಗವಂತನು
ಬರುತ್ತಾರೆ. ನೀವು ತಂದೆಯನ್ನು ಕರೆಯುತ್ತೀರಿ - ಬಾಬಾ, ಬನ್ನಿ ನಾವು ಬಹಳ ಪತಿತರಾಗಿದ್ದೇವೆ,
ಹಳೆಯ ಪತಿತ ಪ್ರಪಂಚ, ಪತಿತ ಶರೀರದಲ್ಲಿ ಬಂದು ನಮ್ಮನ್ನು ಪಾವನ ಮಾಡಿ ಎಂದು ನಿಮಂತ್ರಣ
ಕೊಡುತ್ತೀರಲ್ಲವೆ. ಇಲ್ಲಂತೂ ಯಾರೂ ಪಾವನರಿಲ್ಲ. ಅವಶ್ಯವಾಗಿ ಎಲ್ಲಾ ಪತಿತರನ್ನು ಪಾವನರನ್ನಾಗಿ
ಮಾಡಿ ಕರೆದುಕೊಂಡು ಹೋಗುತ್ತಾರಲ್ಲವೆ. ಅಂದಮೇಲೆ ಎಲ್ಲರೂ ಶರೀರವನ್ನು ಬಿಡಬೇಕಾಗುತ್ತದೆ. ಮನುಷ್ಯರು
ಶರೀರ ಬಿಡುವಾಗ ಎಷ್ಟೊಂದು ಕೂಗಾಡುತ್ತಾರೆ. ಆದರೆ ನೀವು ಖುಷಿ-ಖುಷಿಯಿಂದ ಹೋಗುತ್ತೀರಿ. ಈಗ ನಿಮ್ಮ
ಆತ್ಮವು ಸ್ಪರ್ಧೆ ಮಾಡುತ್ತದೆ. ನೋಡೋಣ - ಯಾರು ಶಿವ ತಂದೆಯನ್ನು ಹೆಚ್ಚು ನೆನಪು ಮಾಡುತ್ತಾರೆ?
ಶಿವ ತಂದೆಯ ನೆನಪಿನಲ್ಲಿರುತ್ತಾ ಶರೀರ ಬಿಟ್ಟು ಹೋದರೆ ಅಹೋ ಸೌಭಾಗ್ಯ! ದೋಣಿಯು ಪಾರಾಗುವುದು.
ಎಲ್ಲರಿಗೆ ಈ ರೀತಿ ಪುರುಷಾರ್ಥ ಮಾಡಿ ಎಂದು ತಂದೆಯು ಸಲಹೆ ಕೊಡುತ್ತಾರೆ. ಕೆಲವರು ಸನ್ಯಾಸಿಗಳೂ ಸಹ
ಬಹ್ಮ್ತತ್ವದಲ್ಲಿ ಲೀನವಾಗುವುದನ್ನು ಅಭ್ಯಾಸ ಮಾಡುತ್ತಾರೆ. ನಂತರ ಕೊನೆಯಲ್ಲಿ
ಕುಳಿತು-ಕುಳಿತಿದ್ದಂತೆಯೇ ಶರೀರವನ್ನು ಬಿಟ್ಟು ಬಿಡುತ್ತಾರೆ ಆಗ ಅಲ್ಲಿ ಶಾಂತವಾಗಿ ಬಿಡುತ್ತದೆ.
ಸುಖದ ದಿನಗಳು ಈಗ ಮತ್ತೆ ಬರುತ್ತಿವೆ, ಇದಕ್ಕಾಗಿಯೇ ನೀವು ಪುರುಷಾರ್ಥ ಮಾಡುತ್ತೀರಿ - ಬಾಬಾ, ನಾವು
ತಮ್ಮ ಬಳಿ ಬರುತ್ತೇವೆ, ತಮ್ಮನ್ನೇ ನೆನಪು ಮಾಡುತ್ತಾ-ಮಾಡುತ್ತಾ ನಾವು ಪವಿತ್ರರಾದಾಗ ತಾವು
ನಮ್ಮನ್ನು ಜೊತೆ ಕರೆದುಕೊಂಡು ಹೋಗುತ್ತೀರಿ. ಮೊದಲು ಕಾಶಿಯ ಬಾವಿಯಲ್ಲಿ ಬೀಳುತ್ತಿದ್ದಾಗ ಬಹಳ
ಪ್ರೀತಿಯಿಂದ ಬೀಳುತ್ತಿದ್ದಿರಿ. ನಾವು ಮುಕ್ತರಾಗಿ ಬಿಡುತ್ತೇವೆಂದು ತಿಳಿದು ಬಿಡುತ್ತಿದ್ದರು.
ನೀವೀಗ ತಂದೆಯನ್ನು ನೆನಪು ಮಾಡುತ್ತಾ ಶಾಂತಿಧಾಮಕ್ಕೆ ಹೊರಟು ಹೋಗುವಿರಿ. ನೀವೀಗ ತಂದೆಯನ್ನು ನೆನಪು
ಮಾಡುತ್ತೀರಿ. ಈ ನೆನಪಿನ ಬಲದಿಂದಲೇ ಪಾಪಗಳು ನಾಶವಾಗುತ್ತವೆ. ನೀರಿನಿಂದ ಪಾಪವು ಕಳೆಯುವುದು,
ಮುಕ್ತಿ ಸಿಗುವುದೆಂದು ಅವರು ತಿಳಿಯುತ್ತಾರೆ ಆದರೆ ಅದು ಯೋಗಬಲವಲ್ಲ. ಪಾಪಗಳ ಖಾತೆಯು
ಆರಂಭವಾಗುತ್ತದೆ. ಕರ್ಮ, ಅಕರ್ಮ, ವಿಕರ್ಮದ ಗತಿಯನ್ನು ತಂದೆಯು ತಿಳಿಸುತ್ತಾರೆ. ರಾಮ ರಾಜ್ಯದಲ್ಲಿ
ಕರ್ಮವು ಅಕರ್ಮವಾಗುತ್ತದೆ, ರಾವಣ ರಾಜ್ಯದಲ್ಲಿ ಕರ್ಮಗಳು ವಿಕರ್ಮವಾಗುತ್ತವೆ. ಸತ್ಯಯುಗದಲ್ಲಿ
ವಿಕಾರ ಮೊದಲಾದ ಮಾತಿರುವುದಿಲ್ಲ.
ಮಧುರಾತಿ ಮಧುರ ಮಕ್ಕಳಿಗೆ ತಿಳಿದಿದೆ - ತಂದೆಯು ನಮಗೆ ಎಲ್ಲಾ ಯುಕ್ತಿಗಳನ್ನು, ಎಲ್ಲಾ
ರಹಸ್ಯಗಳನ್ನು ತಿಳಿಸುತ್ತಾರೆ. ಮುಖ್ಯವಾದ ಮಾತಾಗಿದೆ - ತಂದೆಯನ್ನು ನೆನಪು ಮಾಡಿ, ಪತಿತ-ಪಾವನ
ತಂದೆಯು ನಿಮ್ಮ ಸನ್ಮುಖದಲ್ಲಿ ಕುಳಿತಿದ್ದಾರೆ, ಎಷ್ಟು ನಿರ್ಮಾಣವಾಗಿದ್ದಾರೆ! ಯಾವುದೇ
ಅಹಂಕಾರವಿಲ್ಲ. ಸಂಪೂರ್ಣ ರೀತಿಯಿಂದ ನಡೆಯುತ್ತಾರೆ. ಬಾಪ್ದಾದಾ ಇಬ್ಬರೂ ಮಕ್ಕಳ ಸೇವಕರಾಗಿದ್ದಾರೆ.
ನಿಮಗೆ ಇಬ್ಬರು ಸೇವಕರಿದ್ದಾರೆ, ಶ್ರೇಷ್ಠಾತಿ ಶ್ರೇಷ್ಠ ಶಿವ ತಂದೆ ಮತ್ತು ಪ್ರಜಾಪಿತ ಬ್ರಹ್ಮಾ.
ತ್ರಿಮೂರ್ತಿ ಬ್ರಹ್ಮನೆಂದು ಮನುಷ್ಯರು ಹೇಳುತ್ತಾರೆ. ಅರ್ಥವನ್ನು ತಿಳಿದುಕೊಂಡಿಲ್ಲ. ತ್ರಿಮೂರ್ತಿ
ಬ್ರಹ್ಮನು ಏನು ಮಾಡುತ್ತಾರೆಂದು ತಿಳಿದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ಸದಾ ಈ
ನಿಶ್ಚಯವಿರಲಿ - ನಾವು ಈಶ್ವರೀಯ ಸಂತಾನರಾಗಿದ್ದೇವೆ. ನಾವು ಶ್ರೇಷ್ಠ ಮತದಂತೆ ನಡೆಯಬೇಕಾಗಿದೆ.
ಯಾರಿಗೂ ದುಃಖವನ್ನು ಕೊಡಬಾರದು. ಎಲ್ಲರಿಗೆ ಸುಖದ ಮಾರ್ಗವನ್ನು ತಿಳಿಸಬೇಕಾಗಿದೆ.
2) ಸುಪುತ್ರರಾಗಿ ತಂದೆಗೆ
ಬಲಿಹಾರಿಯಾಗಬೇಕಾಗಿದೆ. ತಂದೆಯ ಪ್ರತಿಯೊಂದು ಕಾಮನೆಯನ್ನು ಪೂರೈಸಬೇಕಾಗಿದೆ. ಹೇಗೆ ಬಾಪ್ದಾದಾ
ನಿರ್ಮಾಣ ಮತ್ತು ನಿರಹಂಕಾರಿಯಾಗಿದ್ದಾರೆ ಅದೇರೀತಿ ತಂದೆಯ ಸಮಾನರಾಗಬೇಕು.
ವರದಾನ:
ಕಲ್ಯಾಣಕಾರಿ
ತಂದೆ ಮತ್ತು ಸಮಯದ ಪ್ರತಿ ಕ್ಷಣ ಲಾಭ ತೆಗೆದುಕೊಳ್ಳುವಂತಹ ನಿಶ್ಚಯ ಬುದ್ಧಿ, ನಿಶ್ಚಿಂತ ಭವ.
ಏನೇ ದೃಶ್ಯ ನಡೆಯುತ್ತಿದೆ
ಅದನ್ನು ತ್ರಿಕಾಲದರ್ಶಿಗಳಾಗಿ ನೋಡಿ, ಸಾಹಸ ಮತ್ತು ಉಲ್ಲಾಸದಲ್ಲಿರುತ್ತಾ ಸ್ವಯಂ ಸಹ ಸಮರ್ಥ ಆತ್ಮ
ಆಗಿ ಮತ್ತು ವಿಶ್ವವನ್ನೂ ಸಹ ಸಮರ್ಥವನ್ನಾಗಿ ಮಾಡಿ. ಸ್ವಯಂ ನೀವು ಬಿರುಗಾಳಿಗೆ ಅಲುಗಾಡಬೇಡಿ,
ಅಚಲರಾಗಿ. ಏನು ಸಮಯ ಸಿಕ್ಕಿದೆ ಜೊತೆಯಲ್ಲಿ ಸಿಕ್ಕಿದೆ, ಅನೇಕ ಪ್ರಕಾರದ ಖಜಾನೆ ಸಿಗುತ್ತಿದೆ
ಅದರಿಂದ ಸಂಪತ್ತಿವಾನ್ ಮತ್ತು ಸಮರ್ಥವಾನ್ ಆಗಿ. ಇಡೀ ಕಲ್ಪದಲ್ಲಿ ಇಂತಹ ದಿನಗಳು ಮತ್ತೆ
ಬರುವುದಿಲ್ಲ. ಆದ್ದರಿಂದ ನಿಮ್ಮ ಎಲ್ಲಾ ಚಿಂತೆಗಳನ್ನು ತಂದೆಗೆ ಕೊಟ್ಟು ನಿಶ್ಚಯಬುದ್ಧಿಯವರಾಗಿ ಸದಾ
ನಿಶ್ಚಿಂತರಾಗಿರಿ, ಕಲ್ಯಾಣಕಾರಿ ತಂದೆ ಮತ್ತು ಸಮಯದ ಪ್ರತಿ ಸೆಕೆಂಡ್ ಲಾಭ ಪಡೆದುಕೊಳ್ಳಿ.
ಸ್ಲೋಗನ್:
ತಂದೆಯ ಸಂಗದ ರಂಗನ್ನು
ಹಚ್ಚಿಕೊಂಡಾಗ ದುಷ್ಠತನ ಸ್ವತಃ ಸಮಾಪ್ತಿಯಾಗಿ ಬಿಡುವುದು.